News Cafe | ಸರ್ಕಾರ ಮತ್ತು ಸಚಿವಾಲಯ ನೌಕರರ ಸಂಘದ ನಡುವೆ ಜೋರಾದ ಫೈಟ್ | HR Ranganath | May 27, 2022

2022-05-27 9

ಸರ್ಕಾರ ಮತ್ತು ಸಚಿವಾಲಯ ನೌಕರರ ಸಂಘದ ನಡುವೆ ಫೈಟ್ ಜೋರಾಗ್ತಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧದಲ್ಲಿ ಸಚಿವಾಲಯ ಬಂದ್‍ಗೆ ಇವತ್ತು ಸಚಿವಾಲಯ ನೌಕರರ ಸಂಘ ಕರೆ ನೀಡಿದೆ. ಆದ್ರೆ, ಸರ್ಕಾರ ಅಸ್ತ್ರ ಪ್ರಯೋಗಿಸಿದ್ದು, ಸಚಿವಾಲಯದ ಬಂದ್ ಆಚರಿಸಲು ಕರೆ ನೀಡಿರುವು ಕಾನೂನು ಬಾಹಿರ ಅಂತ ಸುತ್ತೋಲೆ ಹೊರಡಿಸಿದೆ. ಸಚಿವಾಲಯದ ಎಲ್ಲಾ ಅಧಿಕಾರಿ/ಸಿಬ್ಬಂದಿ ಕಚೇರಿಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಒಂದು ವೇಳೆ, ಮೇಲಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕಚೇರಿಗೆ ಗೈರಾದ್ರೆ ಶಿಸ್ತಿನ ಕ್ರಮ ಕೈಗೊಳ್ತೇವೆ. ಅನುಮತಿ ಇಲ್ಲದೆ ಗೈರಾದ್ರೆ ಅದನ್ನ ಲೆಕ್ಕಕ್ಕಿಲ್ಲದ ಅವಧಿ ಎಂದು ಪರಿಗಣಿಸ್ತೇವೆ ಅಂತ ಮುಖ್ಯಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕಚೇರಿಗೆ ಹಾಜರಾಗಲು ಇಚ್ಛೆ ಪಡುವ ಅಧಿಕಾರಿ/ಸಿಬ್ಬಂದಿಗೆ ಅಡ್ಡಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, ಶಿಸ್ತು ಕಮ ದಾಖಲಿಸಲು ಕ್ರಮವಹಿಸಲಾಗುವುದು ಎಂದೂ ವಾರ್ನಿಂಗ್ ಕೊಟ್ಟಿದ್ದಾರೆ. 542 ಕಿರಿಯ ಸಹಾಯಕರ ಹುದ್ದೆಗಳ ಕಡಿತ ಪ್ರಸ್ತಾಪ ಕೈಬಿಡಬೇಕು. ನಿವೃತಿಯಾದ ಅಧಿಕಾರಿ, ನೌಕರರ ಪುನರ್ ನೇಮಕಾತಿ ರದ್ದು ಮಾಡಬೇಕು. ಸಚಿವಾಲಯ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶ ಮರುಸ್ಥಾಪಿಸಬೇಕು ಅನ್ನೋದು ಸಚಿವಾಲಯ ನೌಕರರ ಸಂಘದ ಬೇಡಿಕೆ.

#HRRanganath #NewsCafe #PublicTV